ವೇದಾಂತಭಾರತೀ, ಕೃಷ್ಣರಾಜನಗರ
ಶ್ರೀ ಶಂಕರಜಯಂತಿಮಹೋತ್ಸವ
ವೇದಾಂತಭಾರತೀ, ಕೃಷ್ಣರಾಜನಗರ
ಶ್ರೀ ಶಂಕರಜಯಂತಿಮಹೋತ್ಸವ 2026
ವೇದಾಂತಭಾರತಿಯ ಮಾರ್ಗದರ್ಶನದಲ್ಲಿ ಪ್ರತಿವರ್ಷವೂ ಶಂಕರಜಯಂತಿಯ ಆಚರಣೆಯನ್ನು ಸ್ತೋತ್ರಪಾರಾಯಣದ ಮೂಲಕ ನಾಡಿನ ಜನತೆ ಆಚರಿಸುತ್ತಿರುವುದು ತಮಗೆ ತಿಳಿದ ವಿಷಯ. ಈ ವರ್ಷವೂ ನಾವು ನಮ್ಮ ನಮ್ಮ ಕೇಂದ್ರಗಳಲ್ಲಿ / ಮನೆಗಳಲ್ಲಿ ಪ್ರತಿವರ್ಷದಂತೆ ಶ್ರೀಶಾಂಕರಸ್ತವಮಾಲಾ ಸ್ತೋತ್ರಪಾರಾಯಣದ ಮೂಲಕ ಶಂಕರಜಯಂತಿಯನ್ನು ಈ ರೀತಿಯಾಗಿ ಆಚರಿಸೋಣ.
- ಪ್ರತಿದಿನ ಬೆಳಿಗ್ಗೆ ಮನೆಯಲ್ಲಿ ಪ್ರಾತಃಸ್ಮರಣೆಸ್ತೋತ್ರದ ಪಾರಾಯಣ.
- 1ನೇ ದಿನ- ಗಣೇಶಪಂಚರತ್ನ, ಶಿವಾನಂದಲಹರೀ ಹಾಗೂ ಶಂಕರಾಚಾರ್ಯಪದಾವಲಂಬಸುವರ್ಣಮಾಲಾಸ್ತುತಿಗಳ ಪಾರಾಯಣ.
- 2ನೇ ದಿನ- ಏಕಶ್ಲೋಕೀ, ದಶಶ್ಲೋಕೀ, ಸುಬ್ರಹ್ಮಣ್ಯಭುಜಂಗ ಹಾಗೂ ಶಂಕರಾಚಾರ್ಯಭುಜಂಗಪ್ರಯಾತಸ್ತೋತ್ರಗಳ ಪಾರಾಯಣ.
- 3ನೇ ದಿನ- ಲಕ್ಷ್ಮೀನೃಸಿಂಹಪಂಚರತ್ನ, ಲಕ್ಷ್ಮೀನೃಸಿಂಹಕರುಣಾರಸ್ತೋತ್ರ ಹಾಗೂ ಆಚಾರ್ಯಪದಾವಲಂಬನಸ್ತುತಿಗಳ ಪಾರಾಯಣ.
- 4ನೇ ದಿನ- ಲಲಿತಾಪಂಚರತ್ನ, ಶಾರದಾಭುಜಂಗ, ಕನಕಧಾರಾಸ್ತೋತ್ರ ಹಾಗೂ ಶಂಕರಭಗವತ್ಪೂಜ್ಯಪಾದಾಚಾರ್ಯಸ್ತವಗಳ ಪಾರಾಯಣ.
- 5ನೇ ದಿನ - ದಕ್ಷಿಣಾಮೂರ್ತಿಅಷ್ಟಕ, ದಕ್ಷಿಣಾಮೂರ್ತಿಸ್ತೋತ್ರ(ಉಪಾಸಕಾನಾಂ), ರಾಮಭುಜಂಗ ಹಾಗೂ ತೋಟಕಾಷ್ಟಕಗಳ ಪಾರಾಯಣ. ನಂತರ ಶ್ರೀಶಂಕರರಿಗೆ ಷೋಡಶೋಪಚಾರಪೂಜೆ ಹಾಗೂ ಉಪನ್ಯಾಸವನ್ನು ನೆರವೇರಿಸುವುದು.
ನಂತರ ಶಂಕರಜಯಂತಿ ಆಚರಣೆಯ ವರದಿಯನ್ನು ವೇದಾಂತಭಾರತಿಗೆ ಕಳುಹಿಸುವುದು.
ಪಾಡ್ಯದಿಂದ ಪಂಚಮಿಯವರೆಗೆ ಶ್ರೀ ಶಂಕರಜಯಂತಿಯನ್ನು ಆಚರಿಸುವವರಿಗೆ ಈ ವರ್ಷ ಎಪ್ರಿಲ್18 ರಿಂದ 21ರವರೆಗೆ 4 ದಿನಗಳು ಮಾತ್ರ ಲಭ್ಯವಿರುವುದರಿಂದ ಸ್ತೋತ್ರಗಳನ್ನು 4 ದಿನಕ್ಕೆ ಹಂಚಿಕೊಂಡು ಪಾರಾಯಣ ಮಾಡಬೇಕು. ಅಥವಾ ತಮ್ಮ ತಮ್ಮ ಕೇಂದ್ರಗಳ ಅನುಕೂಲಕ್ಕೆ ತಕ್ಕಂತೆ ಒಂದು ದಿನ ಮುಂಚಿತವಾಗಿ (ಎಪ್ರಿಲ್ 17ರಿಂದ) ಆರಂಭಿಸಿ 5 ದಿನಗಳು ಕೂಡ ಪಾರಾಯಣ ಮಾಡಬಹುದು.
ಶಾಂಕರಸ್ತವಮಾಲಾ ಕನ್ನಡ, ದೇವನಾಗರಿ ಹಾಗೂ ತೆಲುಗು ಲಿಪಿಯ ಪುಸ್ತಕಗಳು ಹಾಗೂ ಧ್ವನಿಸುರುಳಿ ವೇದಾಂತಭಾರತಿಯಿಂದ ಲಭ್ಯ. ವೇದಾಂತಭಾರತಿಯ ವೆಬ್‌ಸೈಟ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ನಿರ್ದೇಶಕರು, ವೇದಾಂತಭಾರತೀ
Vedanta Bharati, Krishnarajanagar
Sri Shankara Jayanti Mahotsava 2026
It is well known that every year, under the guidance of Vedanta Bharati, people across the region celebrate Shankara Jayanti through the recitation of stotras. This year too, let us celebrate Shankara Jayanti in our respective centers/homes, as every year, through the recitation of the Sri Shankara Stavamala Stotras in the following manner:
Daily morning: Recitation of Pratah Smarana Stotra at home.
- Day 1: Recitation of Ganesha Pancharatnam, Shivananda Lahari, and Shankaracharya Padavalamba Suvarna Mala Stuti.
- Day 2: Recitation of Ekashloki, Dashashloki, Subrahmanya Bhujangam, and Shankaracharya Bhujanga Prayata Stotra.
- Day 3: Recitation of Lakshmi Narasimha Pancharatnam, Lakshmi Narasimha Karuna Rasa Stotra, and Acharya Padavalambana Stuti.
- Day 4: Recitation of Lalita Pancharatnam, Sharada Bhujangam, Kanakadhara Stotra, and Shankara Bhagavat Pujyapada Acharya Stava.
- Day 5: Recitation of Dakshinamurti Ashtakam, Dakshinamurti Stotra (Upasakanam), Rama Bhujangam, and Totakashtakam.
After this, perform Shodashopachara Puja to Sri Shankara and arrange a discourse.
After the celebrations, a report of the Shankara Jayanti observance should be sent to Vedanta Bharati.
As only 4 days (April 18 to April 21) are available this year for those observing from Padya to Panchami, the stotras should be distributed across 4 days. Alternatively, based on convenience, one may begin a day earlier (April 17) and complete the recitation over 5 days.
Books of Shankara Stavamala in Kannada, Devanagari, and Telugu scripts, along with audio recordings, are available from Vedanta Bharati. They can also be downloaded free of cost from the Vedanta Bharati website.
Director,
Vedanta Bharati
ಶಾಂಕರಸ್ತವಮಾಲಾ
125-126, Abalashrama, DV Gundappa Rd, Basavanagudi, Bengaluru - 560 004. ಸ್ಥಳ: ಅಬಲಾಶ್ರಮ, 125-126, D.V. ಗುಂಡಪ್ಪ ರಸ್ತೆ, ಬಸವನಗುಡಿ, ಬೆಂಗಳೂರು - 560004.
ಸಮಯ: ಬೆಳಿಗ್ಗೆ 11.30 ರಿಂದ 12.30